ಇಂದು ಕನ್ನಡ ಮಹಿಳಾ ಸಾಹಿತ್ಯವು ಎರಡು ಸವಾಲುಗಳನ್ನು ಎದುರಿಸುತ್ತಲಿದೆ. ಪುರುಷರಷ್ಟು ಮುಕ್ತ ಗಂಭೀರವಾಗಿ ಬರೆಯದಿರುವುದು ಮತ್ತು ಪುರುಷರಂತೆ ಧಾವಿಸಿ ಪ್ರಕಾಶನ ಅವಕಾಶನಗಳನ್ನು ದೊರಕಿಸಿಕೊಳ್ಳದಿರುವುದು. ಈ ಎರಡೂ ನೆಲೆಗಳಲ್ಲಿ ಮಹಿಳೆಗೆ 'ಸಾಹಿತ್ಯಿಕ ನ್ಯಾಯ' ದೊರಕಿಸಿ ಕೊಡುವುದಕ್ಕಾಗಿ ಅಸ್ತಿತ್ವಕ್ಕೆ ಬಂದಿದೆ ಮಹಿಳಾ ಸಾಹಿತ್ಯಿಕಾ. ಮಹಿಳಾ ಸಾಹಿತ್ಯವನ್ನು ಕುರಿತು ಅಧ್ಯಯನ ನಡೆಸುವುದು, ಪ್ರಕಟಿಸುವುದು ಮಾತ್ರ ಈ ಸಂಸ್ಥೆಯ ಗುರಿಯಾಗಿದೆ. ಮಹಿಳೆಯ ಸಾಹಿತ್ಯಿಕ ಸಮಸ್ಯೆಗಳೂ ಅನೇಕ, ಸಾಮಾಜಿಕ ಸಮಸ್ಯೆಗಳೂ ಅನೇಕ. ಇವರು ಆಗಾಗ ಸೇರಿ ನಡೆಸುವ 'ಚಿಂತನ ಗೋಷ್ಟಿ'ಗಳಿಂದ ಕಳೆದುಕೊಂಡ ಹಳೆಯ ದಾರಿಗಳನ್ನು ಹುಡುಕಬಹುದು, ಹೊಸ ದಾರಿಗಳನ್ನು ಹುಟ್ಟಿಸಬಹುದು. ಈ ದೃಷ್ಟಿಯಿಂದಲೂ ಬರಹಗಾರ್ತಿಯರನ್ನು ಸಂಘಟಿಸಿ, ಸಮಾಲೋಚನೆ ಕಮ್ಮಟಗಳನ್ನು ಏರ್ಪಡಿಸಿ, ಫಲಿತಗಳನ್ನು ಪ್ರಕಟಿಸುವುದು ಈ ಸಂಸ್ಥೆಯ ಇನ್ನೊಂದು ಉದ್ದೇಶವಾಗಿದೆ.ಆರ್ಥಿಕವಾಗಿ 'ಲಾಭವಿಲ್ಲ- ನಷ್ಟವಿಲ್ಲ' ಈ ತತ್ವದ ನೆಲೆಗಟ್ಟಿನ ಮೇಲೆ ಇದು ರಚಿತಗೊಂಡಿದೆ."'ಮಹಿಳಾ ಸಾಹಿತ್ಯಿಕಾ ಪ್ರಕಾಶನ ಸಂಸ್ಥೆಯನ್ನು ಶ್ರೀಮತಿ ಹನುಮಾಕ್ಷಿ ಗೋಗಿಅವರು ಪ್ರಾರಂಭಿಸಿ,ಅದರ ಮೂಲಕ ಅವರು ಅನೇಕ ಲೇಖಕಿಯರ ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ.ಇಲ್ಲಿಯವರೆಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಒಟ್ಟು ೩೮ ಕೃತಿಗಳು ಪ್ರಕಟಗೊಂಡಿವೆ. ೧. ಧುಮ್ಮಸು (ಕಾದಂಬರಿ)ಗೀತಾ ನಾಗಭೂಷಣ ೧೯೯೪ ರೂ ೪೫ ೨. ದಾಹತೀರ (ಕವನ)ಮಾಲತಿ ಪಟ್ಟಣಶೆಟ್ಟಿ ೧೯೯೪ ರೂ ೨೫ ೩. ನನ್ನಂಥವರು (ಕವನ)ಶೈಲಜಾ ಉಡಚಣ ೧೯೯೫ ರೂ ೨೫ ೪. ಪ್ರವಾಹ (ಕಥೆ)ಭಾಗೀರಥಿ ಹೆಗ್ಗಡೆ ೧೯೯೫ ರೂ ೩೫ ೫. ನನ್ನೊಳಗಿನ ಕವಿತೆ (ಕವನ)ವಿದ್ಯಾ ಕುಂದರಗಿ ೧೯೯೫ ರೂ ೩೦ ೬. ಸುರಪುರ ತಾಲೂಕಿನ ಶಾಸನಗಳು(ಸಂಶೋಧನೆ)ಹನುಮಾಕ್ಷಿ ಗೋಗಿ ೧೯೯೫ ರೂ ೨೦೦ ೭. ವಾಸ್ತವ (ಕಥೆ)ಗಂಗಾ ಪಾದೇಕಲ್ಲ ೧೯೯೬ ರೂ ೩೫ ೮. ಸಾರಸರಸ್ವತಿ(ಜೀವನ-ಬರೆಹ)ವಿಜಯಾ ದಬ್ಬೆ ೧೯೯೬ ರೂ ೭೫ ೯. ಥೇರಿಗಾಥಾ(ಪಾಲಿ ಕವನ-ಅನುವಾದ)ಮಧು ವೆಂಕಾರೆಡ್ಡಿ ೧೯೯೬ ರೂ ೧೧೦ ೧೦. ಬಿಡುಗಡೆಯ ಸಡಗರ(ಹಾಸ್ಯ)ಗುರುದೇವಿ ಹುಲೆಪ್ಪನವರಮಠ ೧೯೯೬ ರೂ ೨೫ ೧೧. ಮಕ್ಕಳ ಶಿಕ್ಷಣ ಚಿಂತನೆಗಳು(ಪ್ರಬಂಧ)ಲಲಿತಾಂಬಾ ವೃಷಭೇಂದ್ರಸ್ವಾಮಿ ೧೯೯೭ ರೂ ೪೦ ೧೨. ಕರಗದೀ ಕಾರಿರುಳು (ಕವನ)ಕುಸುಮ ಕರಾಳೆ ೧೯೯೭ ರೂ ೨೮ ೧೩. ಗಾಂಧೀ ಮಗಳು (ಕಥೆ)ಶಾಂತಾದೇವಿ ಕಣವಿ ೧೯೯೭ ರೂ ೩೦ ೧೪. ದಿಗಂತದಾಚೆ(ಮರಾಠಿ ಪ್ರಬಂಧ-ಅನುವಾದ)ಸರಸ್ವತಿ ರಿಸಬೂಡ ೧೯೯೭ ರೂ ೩೦ ೧೫. ಪಾಂಚಾಲಿ ಮತ್ತು ಇತರ ನಾಟಕಗಳು(ನಾಟಕ)ವಿಜಯಾ ಸುಬ್ಬರಾಜ ೧೯೯೮ ರೂ ೭೦ ೧೬. ಪ್ರಲೋಭನೆ(ವಿಮರ್ಶೆ)ಮಣಿಮಾಲಿನಿ ವಿ.ಕೆ. ೧೯೯೮ ರೂ ೩೫ ೧೭. ಶೈಲಜಾ ಸಮಗ್ರ ಕಾವ್ಯ(ಕಾವ್ಯ)ಶೈಲಜಾ ಉಡಚಣ ೧೯೯೮ ರೂ ೨೦೦ ೧೮. ಒಂದು ಕನಸಿನ ಪಯಣ(ಪ್ರವಾಸ)ನೇಮಿಚಂದ್ರ ೧೯೯೯ ರೂ ೧೨೦ ೧೯. ಹೊಸಿಲಾಚೆ ಹೊಸಹೆಜ್ಜೆ(ಕವನ)ಗೀತಾ ವಸಂತ ೧೯೯೯ ರೂ ೨೦ ೨೦. ಅವಳ ಸೂರ್ಯ(ಇಂಗ್ಲಿಷ ಕಥೆ-ಅನುವಾದ)ಉಮಾ ರಾವ್ ೨೦೦೦ ರೂ ೫೦ ೨೧. ನೆನಪಿನಲ್ಲಿ ನಿಂತವರು(ವ್ಯಕ್ತಿ ಚಿತ್ರಗಳು)ಜ್ಯೋತ್ಸ್ನಾ ಕಾಮತ ೨೦೦೦ ರೂ ೭೫ ೨೨. ಶಾಂತಾದೇವಿ ಮಾಳವಾಡ ಸಮಗ್ರ ಕಥೆಗಳು(ಕಥೆಗಳು)ಶಾಂತಾದೇವಿ ಮಾಳವಾಡ ೨೦೦೦ ರೂ ೧೦೦ ೨೩. ನಮ್ಮದೇ ದನಿಯೆತ್ತಿ ಎಂದು ಹಾಡೇವೋ(ಕವನ)ಕೆ.ಸರೋಜಾ ೨೦೦೧ ರೂ ೫೦ ೨೪. ಕಡಲಾಚೆಯ ಕಥೆಗಳು (ಕಥೆ)ಲತಾ ಗುತ್ತಿ ೨೦೦೧ ರೂ ೫೦ ೨೫. ಕರ್ನಾಟಕ ಭಾರತಿ ಸೂಚಿ-ಹನುಮಾಕ್ಷಿ ಗೋಗಿ ೨೦೦೨ ರೂ ೫೦ ೨೬. ಅನುಶಾಸನ (ಸಂಶೋಧನೆ)ಹನುಮಾಕ್ಷಿ ಗೋಗಿ ೨೦೦೨ ರೂ ೧೫೦ ೨೭. ಕಲ್ಲ ಖಣಿಯಾಗು ಕರಕೀ ಬೇರಾಗು(ಕಾದಂಬರಿ)ದಮಯಂತೀ ನರೇಗಲ್ಲ ೨೦೦೩ ರೂ ೭೦ ೨೮. ಶ್ರಾವಣದ ಮಾತುಗಳು(ಕವನ)ಗಂಗಾ ಸ್ವಾಮಿ ೨೦೦೩ ರೂ ೨೫ ೨೯. ಬಾಳು ಸೊಗಸಾದರೂ(ಮರಾಠಿ ಆತ್ಮಚರಿತ್ರೆ-ಅನುವಾದ)ಉಮಾ ಕುಲಕರ್ಣಿ ೨೦೦೪ ೩೦. ಹಾಯ್ ಹೈ ಹೀಲ್ಸ್ (ಹಾಸ್ಯ)ಶೈಲಾ ಛಬ್ಬಿ ೨೦೦೫ ರೂ ೫೦ ೩೧. ಮುನ್ನುಡಿ ಬೆನ್ನುಡಿಗಳ ನಡುವೆ(ಸಮಗ್ರ ಕಾವ್ಯ)ಪ್ರತಿಭಾ ನಂದಕುಮಾರ ೨೦೦೬ ರೂ ೩೦೦ ೩೨. ಅವರು ಪುರಾವೆಗಳನ್ನು ಕೇಳುತ್ತಾರೆ(ಕವನ)ಪ್ರತಿಭಾ ನಂದಕುಮಾರ ೨೦೦೬ ರೂ ೮೦ ೩೩. ಕುಣಿಸಲು ನೀನು(ಕಥೆ)ಸುಮಿತ್ರಾ ಹಲವಾಯಿ ೨೦೦೬ ರೂ ೫೦ ೩೪. ಲಕ್ಕುಂಡಿಯ ಶಾಸನಗಳು(ಸಂಶೋಧನೆ)ಹನುಮಾಕ್ಷಿ ಗೋಗಿ ೨೦೦೮ ರೂ ೨೦೦ ೩೫. ಮುಸುಕಿನೊಳಗಿನ ಗುದ್ದು(ಕಥೆ)ಸೀತಾ ಛಪ್ಪರ ೨೦೦೮ ರೂ ೫೦ ೩೬. ನಾರಾಯಣ ಗುರುವೆಂಬ ನಕ್ಷತ್ರ (ಜೀವನ ಚರಿತ್ರೆ)ಕಮಲಾ ಹೆಮ್ಮಿಗೆ ೨೦೦೯ ರೂ ೭೫ ೩೭. ಬಿಸಿಲು ಬೆಳದಿಂಗಳು (ಕವನ)ಕುಸುಮ ಕರಾಳೆ ೨೦೦೯ ರೂ ೩೫ ೩೮. ಶರಣ ದರ್ಶನ(ವಿಮರ್ಶೆ)ಗುರುದೇವಿ ಹುಲೆಪ್ಪನವರಮಠ ೨೦೧೦ ರೂ ೬೦